ಬೇಸಿಕಲಿ ನಾ ಸೋಂಬೇರಿ!
ಸೋಂಬೇರಿತನದ ಮಧ್ಯೆ ಬರೆದು ಮುಗಿಸಿದ ಎರಡನೆ ಕಾದಂಬರಿಯಿದು.
ಇಡೀ ಕಾದಂಬರಿ ಧರಣಿ ಅನ್ನೋ ಹುಡುಗಿಯ - ಧರಣಿ ಅನ್ನೋ ಹೆಣ್ಣುಮಗಳ ಕತೆ. ಒಂದು ಬೊಗಸೆ ಪ್ರೀತಿಗಾಗಿ ಧರಣಿ ಹಂಬಲಿಸಿದ ಕತೆ.
ನೈತಿಕ - ಅನೈತಿಕತೆಯ ಪರಿಧಿ ಯಾವುದು, ಧರಣಿ ನಿಜಕ್ಕೂ ಮಾಡಿದ್ದು ಸರಿಯಾದ ಕೆಲಸವಾ ಎನ್ನುವನೇಕ ಪ್ರಶ್ನೆಗಳನ್ನು ಮೂಡಿಸುವ ಕತೆಯಿದು.
ಗಂಡು ಹೆಣ್ಣಿನ ಸಂಬಂಧದಲ್ಲಿ ಸರಿ ಯಾವುದು ತಪ್ಯಾವುದು? ನಮ್ಮ ಸಂಬಂಧಗಳು ಪ್ರಕೃತಿಯನ್ನು ಮೀರಿ ನಿಂತಿರುವುದು ದಿಟವೇ? ನಿಮ್ಮಲ್ಲೂ ಒಂದಷ್ಟು ಪ್ರಶ್ನೆಗಳನ್ನು ಮೂಡಿಸುವಲ್ಲಿ ಈ ಪುಸ್ತಕ ಸಫಲವಾದರೆ ನನ್ನ ಪ್ರಯತ್ನ ಸಾರ್ಥಕವಾದಂತೆ.
ಈ ಕತೆ ನನ್ನಲ್ಲಿ ಮೂಡಿದ್ದಾದರೂ ಹೇಗೆ? ನನ್ನವೇ ಒಂದಷ್ಟು ಅನುಭವಗಳು, ನನ್ನ ಗೆಳೆಯರ ಗೆಳತಿಯರ ಅನುಭವಗಳು, ನನ್ನ ಹೆಂಡತಿಯ, ನೆಂಟರ, ಗೆಳತಿಯರ - ಸಹೋದ್ಯೋಗಿಗಳ ಅನುಭವಗಳು - ಅಭಿಪ್ರಾಯಗಳೆಲ್ಲವೂ ಸೇರಿಸಿ ಈ ಕಾದಂಬರಿ ರೂಪುಗೊಂಡಿದೆ. ಅವರೆಲ್ಲರೂ ಕಟ್ಟಿಕೊಟ್ಟ ಚದುರಿದ ಚಿತ್ರಗಳನ್ನು ಒಪ್ಪವಾಗಿ ಜೋಡಿಸುವ ಕೆಲಸವನ್ನಷ್ಟೇ ನಾನಿಲ್ಲಿ ಮಾಡಿರುವೆ.
ಓದಿ, ನಿಮ್ಮಭಿಪ್ರಾಯ ತಿಳಿಸಲು ಮರೆಯಬೇಡಿ.

ondu bogase priti: Ondu bogase preethi
ondu bogase priti: Ondu bogase preethi
Product Details
BN ID: | 2940163479450 |
---|---|
Publisher: | Ashok KR |
Publication date: | 02/23/2020 |
Sold by: | Smashwords |
Format: | eBook |
File size: | 709 KB |
Age Range: | 18 Years |
Language: | Kannada |